![Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ ) Profile](https://pbs.twimg.com/profile_images/1826504432416382976/y3vQoJb6_x96.jpg)
Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ )
@harshaguttedar7
Followers
2K
Following
20K
Statuses
4K
ಭಾರತೀಯ ಕನ್ನಡಿಗ 💛❤️| BJP Aland | Won All 3 Times Zilla Panchayat Elections | Secretary SRG Foundation | Convenor for Aland Bharat Vikas Academy | @bjp4karnataka
gulbarga
Joined December 2012
KMF ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು ಅಧಿಕಾರಿಗಳ ಮೇಲೆ ಒತ್ತಡದ ಸಂಶಯ ವ್ಯಕ್ತವಾಗುತ್ತಿದೆ. ಆಳಂದ ಕಾಂಗ್ರೆಸ್ ಶಾಸಕರಾದ BR ಪಾಟೀಲ್ ಅಣ್ಣನ ಮಗ ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಆರ್ ಕೆ ಪಾಟೀಲ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಅವ್ಯವಹಾರ ಜರುಗಿದೆ. 2019ರಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಒಟ್ಟು 37 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೆಲವರು ಆ ನೇಮಕಾತಿಯ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಈ ಹಿಂದಿನ ಯಾವ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿರುವುದಿಲ್ಲ ಆದರೆ, ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ ಅವರು ಭೃಷ್ಟಾಚಾರ ಹಾಗೂ ಅಕ್ರಮ ನೇಮಕ ಮಾಡುವ ಉದ್ದೇಶದಿಂದಲೇ ನಿವೃತ್ತಿಗೆ ಕೇವಲ 3 ತಿಂಗಳು ಇದ್ದ ಅಧಿಕಾರಿ ಡಾ. ಸಿ ಎಚ್ ಕಮಕೇರಿಯವರನ್ನು 2023ರ ಮೇ ತಿಂಗಳಿನಲ್ಲಿ ಉದ್ದೇಶಪೂರ್ವಕಾಗಿ ಕರ್ನಾಟಕ ಹಾಲು ಮಂಡಳಿಯ ಮೇಲೆ ಒತ್ತಡ ಹೇರಿ ಅವರನ್ನು ಪುನ: ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರೆದುಕೊಂಡು ಬಂದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿರುತ್ತಾರೆ ಒಕ್ಕೂಟದ ಬೈಲಾದ ಪ್ರಕಾರ ನಿವೃತ್ತಿಗೆ 3 ತಿಂಗಳು ಅವಧಿ ಇರುವಾಗ ಯಾವುದೇ ಮಹತ್ತರ ಆದೇಶಗಳನ್ನು, ನೇಮಕಾತಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ ಆದರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆಗಿನ ಅಧ್ಯಕ್ಷ ಆರ್ ಕೆ ಪಾಟೀಲರ ಅವ್ಯವಹಾರಕ್ಕೆ ಸಹಕರಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದಾರೆ. ಇದು ಸ್ಪಷ್ಟವಾಗಿ ಒಕ್ಕೂಟದ ಬೈಲಾ ಹಾಗೂ ನ್ಯಾಯಾಲಯದ ರಿಟ್ ಆದೇಶದ ಉಲ್ಲಂಘನೆಯಾಗಿದೆ. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ ಎಚ್ ಕಮಕೇರಿಯವರು ಕರ್ತವ್ಯಕ್ಕೆ ಹಾಜರಾಗಿ ಮಾಡಿದ ಮೊದಲ ಕೆಲಸವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವುದು. 2019ರ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ SMS ಮೂಲಕ ಪರೀಕ್ಷೆಯ ಮಾಹಿತಿ ನೀಡಿದ್ದು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ. ಅಕ್ರಮ ನೇಮಕ ಮಾಡಿಕೊಳ್ಳುವ ಉದ್ದೇಶದಿಂದಲೇ ತಮಗೆ ಬೇಕಾದವರಿಗೆ ಫೋನ್ ಕರೆ ಮಾಡಿ ತಿಳಿಸಿರುತ್ತಾರೆ. SMS ಕಳುಹಿಸಿರುವುದರಿಂದ ಅರ್ಜಿ ಸಲ್ಲಿಸಿದ ಹಲವು ಅರ್ಹ ಅಭ್ಯರ್ಥಿಗಳು ಸಕಾಲಕ್ಕೆ ಮಾಹಿತಿ ಸಿಗದೇ ಇರುವುದರಿಂದ ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾಗಬೇಕಾಯಿತು. ಈ ತರಾತುರಿಯ ಪ್ರಕ್ರಿಯೆಯಿಂದ ಅರ್ಜಿ ಸಲ್ಲಿಸಿದ ನೂರಾರು ಜನ ��ಮಗೆ ನ್ಯಾಯಯುತವಾಗಿ ಸಿಗಬೇಕಿದ್ದ ನೌಕರಿಯಿಂದ ವಂಚಿತರಾಗಿದ್ದಾರೆ. ಅರ್ಜಿ ಕರೆದ 37 ಹುದ್ದೆಗಳಲ್ಲಿ ಕೇವಲ 27 ಹುದ್ದೆಗಳು ಭರ್ತಿಯಾಗಿವೆ ಇನ್ನೂ 10 ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿವೆ ಇದಕ್ಕೆ ಮುಖ್ಯ ಕಾರಣ ವ್ಯವಸ್ಥಾಪಕ ನಿರ್ದೇಶಕರು ತರಾತುರಿಯಲ್ಲಿ ಕೈಗೊಂಡ ನೇಮಕಾತಿ ಪ್ರಕ್ರಿಯೆ. ಈ ತರಾತುರಿಯ ಪ್ರಕ್ರಿಯೆಯಿಂದ ಹಲವು ಜನರಿಗೆ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ ಅಲ್ಲದೇ ಸಿಕ್ಕಿರುವ ಅರ್ಧಂಬರ್ಧ ಮಾಹಿತಿಯಿಂದ ಹಲವು ಜನರಿಗೆ ಪರೀಕ್ಷೆಗೆ ಹೋಗುವುದಕ್ಕೆ ಆಗಿಲ್ಲ, ಕೆಲವು ಜನರಿಗೆ ಮಾಹಿತಿಯೇ ಮುಟ್ಟಿಲ್ಲ ಹೀಗಾಗಿ ಆ 10 ಹುದ್ದೆಗಳು ಖಾಲಿಯೇ ಉಳಿದಿವೆ. ನೇಮಕಾತಿಯಲ್ಲಿ ಎಲ್ಲರಿಗೆ ಮಾಹಿತಿ ನೀಡಿದ್ದೆವೆಂದು ತೋರಿಸಲು ನಂತರದಲ್ಲಿ ಒಂದು ರಿಜಿಸ್ಟರ್ ಕಾಯ್ದಿಟ್ಟುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆಯಂತೆ ಮೊದಲಿಗೆ ತಾತ್ಕಾಲಿಕ ನೇಮಕ ಪಟ್ಟಿ ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವುದು ಮುಖ್ಯವಾಗಿರುತ್ತದೆ ಆದರೆ ಇಲ್ಲಿ ಸಿಂಧುತ್ವವನ್ನು ಪಡೆಯದೇ ತುರ್ತಾಗಿ ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಿ ಕೇವಲ 6 ದಿನಗಳಿಗೆ ಅವರಿಗೆ ಸಂಬಳ ಪಾವತಿಸಲಾಗಿರುತ್ತದೆ. 6 ದಿನಗಳಿಗೆ ಸಂಬಳ ಪಾವತಿಸಿದ ಮಾತ್ರಕ್ಕೆ ನೇಮಕಾತಿ ಪಾರದರ್ಶಕವಾಗುವುದಿಲ್ಲ. ನಂತರದಲ್ಲಿ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಪತ್ರ ಬರೆದಿದ್ದಾರೆ ಇದನ್ನೆಲ್ಲ ನೋಡಿದರೇ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ತರಾತುರಿಯಲ್ಲಿ ಎಲ್ಲವನ್ನೂ ಮಾಡಿ ಅಕ್ರಮ ನೇಮಕ ಮಾಡಿಕೊಂಡಿರುವುದು ಕಂಡು ಬರುತ್ತಿದೆ ಮೊದಲ ಬಾರಿ ಅಧಿಸೂಚನೆ ಹೊರಡಿಸಿದಾಗ ಬಂದ ಅರ್ಜಿಗಳ ಸಂಖ್ಯೆಗೂ ನಂತರ ಬಂದ ಅರ್ಜಿಗಳ ಸಂಖ್ಯೆಗೂ ವ್ಯತ್ಯಾಸ ಕಾಣುತ್ತಿದೆ. ನಂತರದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ನೇಮಕಗೊಳ್ಳಲು ಕಾರಣರಾಗಿದ್ದಾರೆ. ಗುಮುಲ್‍ನಲ್ಲಿ ನಡೆದ ಅಕ್ರಮ ನೇಮಕಾತಿಯಲ್ಲಿ ಇಂತಿಂಥ ಹುದ್ದೆಗಳಿಗೆ ಇಂತಿಷ್ಟು ದುಡ್ಡು ಎಂದು ದರ ನಿಗದಿ ಮಾಡಿ, ಅಕ್ರಮ ನೇಮಕಾತಿ ಆದೇಶ ಪಡೆದವರಿಂದ ಅಷ್ಟು ಮೊತ್ತದ ಹಣ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ವಿವರ ಈ ಕೆಳಗಿನಂತಿದೆ ಪಶುವೈದ್ಯಕೀಯ ವೈದ್ಯರು- 4 ಹುದ್ದೆ 1 ಹುದ್ದೆಗೆ 15 ಲಕ್ಷ ಕೃಷಿ ಅಧಿಕಾರಿ- 1 ಹುದ್ದೆ 1 ಹುದ್ದೆಗೆ 30 ಲಕ್ಷ ತಾಂತ್ರಿಕ ಅಧಿಕಾರಿ- 2 ಹುದ್ದೆ 1 ಹುದ್ದೆಗೆ 25 ಲಕ್ಷ ಮಾರುಕಟ್ಟೆ ಅಧಿಕಾರಿ- 2 ಹುದ್ದೆ 1 ಹುದ್ದೆಗೆ 25 ಲಕ್ಷ ಮಾರುಕಟ್ಟೆ ಅಧೀಕ್ಷಕ- 2 ಹುದ್ದೆ 1 ಹುದ್ದೆಗೆ 25 ಲಕ್ಷ ವೀಸ್ತೀರ್ಣಾಧಿಕಾರಿ- 7 ಹುದ್ದೆ 1 ಹುದ್ದೆಗೆ 25 ಲಕ್ಷ ಚೆಮಿಸ್ಟ್- 2 ಹುದ್ದೆ 1 ಹುದ್ದೆಗೆ 20 ಲಕ್ಷ ರಕ್ಷಣಾಧಿಕಾರಿ- 1 ಹುದ್ದೆ 1 ಹುದ್ದೆಗೆ 20 ಲಕ್ಷ ಕಿರಿಯ ತಾಂತ್ರಿಕರು- 3 ಹುದ್ದೆ 1 ಹುದ್ದೆಗೆ 15 ಲಕ್ಷ. ನೇಮಕಾತಿ ಆದೇಶ ಪತ್ರದಲ್ಲಿ ನೇಮಕಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು ಬರೆಯಲಾಗಿದೆ. ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ತರಾತುರಿಯಲ್ಲಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಏಕೆ ? ಆದ್ದರಿಂದ ಈ ಪ್ರಕರಣ ಸಮಗ್ರವಾಗಿ ತನಿಖೆ ಮಾಡಿ ಅರ್ಹರನ್ನು ಪರಿಗಣಿಸಿ, ಅನರ್ಹರನ್ನು ಕೈಬಿಟ್ಟು, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಬೇಕು. ಅಲ್ಲದೇ ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದ್ದು ತನಿಖೆ ಪ್ರಾರಂಭ ಇದೆ. @AsianetNewsSN @publictvnews @tv9kannada @BJP4Karnataka @NswamyChalavadi @Narendramurthy
1
22
51
ಆಳಂದ ಪಟ್ಟಣದ SRG ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ " ದರ್ಶನಂ " ವಾರ್ಷಿಕೋತ್ಸವ ದಿನಾಚರಣೆ - 2025 ರ ಅದ್ಭುತ ಕ್ಷಣಗಳು. #Aland
0
4
14
ಆಳಂದ ಪಟ್ಟಣದ ನಮ್ಮ SRG ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ " ದರ್ಶನಂ " ವಾರ್ಷಿಕೋತ್ಸವ ದಿನಾಚರಣೆಯ - 2025 ರ ಅದ್ಭುತ ಕ್ಷಣಗಳು. @BJP4Karnataka @AsianetNewsSN
0
1
5
27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ ! ಗೌರವ��ನ್ವಿತ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅದ್ಭುತ ಜಯಭೇರಿ. ಸಂಘಟಿತ ನಾಯಕತ್ವಕ್ಕೆ ಮತ್ತು ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. #DelhiElectionResult #BJP
1
4
24
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೇಷ್ಠ ಬರಹಗಾರ, ವಿಮರ್ಶಕ, ರಾಷ್ಟ್ರಕವಿ ದಿವಂಗತ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಜನ್ಮದಿನದ ಸ್ಮರಣೆಗಳು. #GSShivarudrappa
0
0
4
ತಮ್ಮ ಸುಮಧುರವಾದ ಕಂಠ ಸಿರಿಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ ಗಾನ ಕೋಗಿಲೆ, ಸಂಗೀತ ಸಾಮ್ರಾಜ್ಞಿ ಭಾರತರತ್ನ ದಿವಂಗತ ಲತಾ ಮಂಗೇಶ್ಕರ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #LataMangeshkar
0
0
4
ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು. ಎಲ್ಲ ಗ್ರಹಗಳ ಅಧಿಪತಿಯಾಗಿರುವ ನಿರಾಕಾರವಾದ ಭಗವಂತನ ಸಗುಣರೂಪವಾಗಿರುವ ಭಗವಾನ್ ಸೂರ್ಯನಾರಾಯಣ ಜಗತ್ತಿಗೆ ಚೈತನ್ಯವನ್ನು ನೀಡಲಿ. #ರಥಸಪ್ತಮಿ #Rathasaptami
0
1
32
ಕಲಬುರಗಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್, ಕಲಬುರಗಿ ಗ್ರಾಮೀಣ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ , ಕಲಬುರಗಿ ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಶಿವರಾಜ್ ಪಾಟೀಲ್ ರದ್ದೆವಾಡಿಗಿ , ಮುಖಂಡರಾದ ಮಹಾದೇವ ಬೆಳಮ್ ಹಾಗೂ ಇತರ ಮುಖಂಡರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. #Kalaburagi
0
0
2
RT @BJP4India: LIVE: Finance Minister Smt @nsitharaman presents Union Budget 2025-26. #ViksitBharatBudget2025
0
597
0
ಆಳಂದ ತಾಲ್ಲೂಕಿನ ಸುಕ್ಷೇತ್ರ ಯಳಸಂಗಿ ಮಠ ಹಾಗೂ ಸುಕ್ಷೇತ್ರ ನಿಂಬಾಳ ಸಮಾಧಾನ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಶ್ರೀ @BYVijayendra ಅಣ್ಣಅವರ ಜೊತೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಲಾಯಿತು. @BJP4Karnataka @Narendramurthy @PrashantMakanur @NswamyChalavadi
0
4
27
12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು. #MadivalaMachideva
0
1
5
ದೇಶದ ಕಡಲ ತೀರವನ್ನು ಸಂರಕ್ಷಿಸುವ ಮಹತ್ವದ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಭಾರತಾಂಬೆಯ ವೀರ ಪುತ್ರರನ್ನು ಸದಾ ಗೌರವಿಸೋಣ. #IndianCoastGuardDay
0
0
5
ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲೊಬ್ಬರಾದ ಕನ್ನಡದ ವರಕವಿ 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಜನಜನಿತರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನ್ಮದಿನದ ಸ್ಮರಣೆಗಳು. #DRBendre
0
0
4
ಕಲ್ಯಾಣ ಕರ್ನಾಟಕಕ್ಕೆ ಮತ್ತೊಮ್ಮೆ ಶೂನ್ಯ ಅನುದಾನ.
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು #CabinetDecisions
0
2
7
ಇಂದು ಸೇಡಂ ರಸ್ತೆಯ ಬೀರನಳ್ಳಿ ಕ್ರಾಸ್ ನ ಪ್ರಕೃತಿ ನಗರದಲ್ಲಿ ಆಯೋಜಿಸಲಾಗಿರುವ ಕೊತ್ತಲ ಸ್ವರ್ಣ ಹಾಗು 7 ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ನನ್ನ ಮಾರ್ಗದರ್ಶ��ರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದೆನು.. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವಂತಹ ಕಾರ್ಯದಲ್ಲಿ ತೊಡಗಿರುವ ಅದೆಷ್ಟೋ ಕಾರ್ಯಕರ್ತರ ಪಾಲಿನ ಪ್ರೇರಣೆಯ ಶಕ್ತಿಯಾಗಿರುವ ಡಾಕ್ಟರ್ ಅವರ ಜೀವನವು ಆದರ್ಶಪ್ರಾಯವೇ ಸರಿ.. #Sedam @BJP4Karnataka @RSSorg
1
3
38