eshwar_khandre Profile Banner
Eshwar Khandre Profile
Eshwar Khandre

@eshwar_khandre

Followers
56K
Following
9K
Statuses
9K

Cabinet Minister for Forest, Ecology and Environment Govt of Karnataka | MLA - Bhalki | RT's are Not Endorsements

Bidar, Karnataka
Joined March 2017
Don't wanna be here? Send us removal request.
@eshwar_khandre
Eshwar Khandre
1 year
ಲೋಕನಾಯಕ ಡಾ. ಭೀಮಣ್ಣ ಖಂಡ್ರೆ @100 ಪೂಜ್ಯ ತಂದೆಯವರಾದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ 100 ವರ್ಷಗಳ ಸಾರ್ಥಕ ಬದುಕು ಅವರ ಜನ್ಮಶತಮಾನೋತ್ಸವ ಆಚರಣೆ ಮಾಡಿದ್ದು ನಿಜಕ್ಕೂ ನಮ್ಮ ಪುಣ್ಯ. ಪೂಜ್ಯ ಭೀಮಣ್ಣ ಖಂಡ್ರೆ ಅವರ ಬದುಕೇ ನಮ್ಮೆಲ್ಲರಿಗೂ ಆದರ್ಶ ಅವರ ಆಶೀರ್ವಾದ ಮಾರ್ಗದರ್ಶನ ನಮ್ಮೆಲ್ಲರಿಗೂ ಇನ್ನು ಹೆಚ್ಚಿನ ಕಾಲ ಲಭಿಸಲೆಂದು ಪ್ರಾರ್ಥಿಸುತ್ತೇನೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಪೂಜ್ಯ ಸುತ್ತೂರು ಶ್ರೀಗಳು, ಸಿರಿಗೆರೆ ಶ್ರೀಗಳು, ಸಿದ್ದಗಂಗಾ ಶ್ರಿಗಳು, ಶಿಶೈಲ್ ಜಗದ್ಗುರುಗಳು, ನಾಡಿನ ಎಲ್ಲಾ ಪೂಜ್ಯ ಶ್ರೀಗಳು, ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರು, ಮುಖ್ಯಮಂತ್ರಿಗಳಾದ ಶ್ರೀ @siddaramaiah, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @JagadishShettar, ಹಿರಿಯರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀ ಶಾಮನೂರು ಶಿವಶಂಕ್ರಪ್ಪ, ಸಚಿವ ಸಂಪುಟದ ಸಚಿವರುಗಳು, ಶಾಸಕ ಮಿತ್ರರು, ಮಾಜಿ ಶಾಸಕರು, ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ನಮ್ಮ ಪ್ರೀತಿಯ ಅಭಿಮಾನಿಗಳಿಗೆ ಹೃದಯಾಂತರಾಳದ ಅನಂತ ಕೃತಜ್ಞೆತೆಗಳು. #LokanayakBhimannaKhandre100
Tweet media one
Tweet media two
Tweet media three
Tweet media four
35
64
544
@eshwar_khandre
Eshwar Khandre
1 day
ಬೀದರ್ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ ನಂತರದ ಬಾಲಕ/ಬಾಲಕಿಯರ ವಸತಿ ನಿಲಯ ಕಟ್ಟಡ ಮತ್ತು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ಮಾತನಾಡಿದೆನು. ಬಡ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ವಸತಿ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶ. ಈ ನೂತನ ಕಟ್ಟಡಗಳು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಮತ್ತು ವಾಸ್ತವ್ಯ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಲಿದೆ.
Tweet media one
Tweet media two
Tweet media three
Tweet media four
3
11
58
@eshwar_khandre
Eshwar Khandre
2 days
ಬೀದರ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲು ಒದಗಿಸಲಾಗಿರುವ ಬಸ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದೆನು. ವಿಜ್ಞಾನ ಹಾಗೂ ತಾಂತ್ರಿಕ ��ಿಕ್ಷಣವು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಅತ್ಯಗತ್ಯ. ವಿದ್ಯಾರ್ಥಿಗಳು ಪ್ರತ್ಯೇಕ್ಷ ಅನುಭವದ ಮೂಲಕ ವಿಜ್ಞಾನವನ್ನು ಅರ್ಥೈಸಿ, ಹೊಸ ಕಲಿಕೆ ಮತ್ತು ಆವಿಷ್ಕಾರಗಳತ್ತ ಮುಖ ಮಾಡಬೇಕು ಎಂದು ತಿಳಿಸಿದೆನು.
Tweet media one
Tweet media two
Tweet media three
Tweet media four
2
14
78
@eshwar_khandre
Eshwar Khandre
2 days
ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ,ಮಾತನಾಡಿದೆನು. ಗ್ರಂಥಾಲಯಗಳು ಜ್ಞಾನ ನಿಧಿಗಳು ಅವು ಸಮಾಜದ ಬೆಳವಣಿಗೆಗೆ, ಸಂಶೋಧನೆಗೆ ಮತ್ತು ಸ್ಮಾರ್ಟ್ ಶೈಕ್ಷಣಿಕ ವ್ಯವಸ್ಥೆ ನಿರ್ಮಿಸಲು ಮಹತ್ತರವಾದ ಪಾತ್ರ ವಹಿಸುತ್ತವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಯುವಕರು ಈ ಸೌಲಭ್ಯದಿಂದ ಹೆಚ್ಚಿನ ಪ್ರಯೋಜನ ಪಡೆಯಲಿ.
Tweet media one
Tweet media two
Tweet media three
Tweet media four
2
7
32
@eshwar_khandre
Eshwar Khandre
3 days
RT @GajaMolkere: MP @SagarKhandre12’s Appeal Approved! Union Tourism Minister @gssjodhpur has approved Bidar’s development under the Swade…
0
5
0
@eshwar_khandre
Eshwar Khandre
4 days
ಬಸವಸೇವಾ ಪ್ರತಿಷ್ಠಾನ ಬಸವಗಿರಿ ಬೀದರ್ ವತಿಯಿಂದ ಆಯೋಜಿಸಲಾದ ವಚನ ವಿಜಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆನು. ಪೂಜ್ಯ ಡಾ. ಬಸವಲಿಂಗ ಪಟ್ಟದೇವರು, ಹುಲಸೂರು ಶ್ರೀಗಳು, ಬಸವಗಿರಿ ಅಧ್ಯಕ್ಷರಾದ ಗಂಗಾಬಿಕಾ ಅಕ್ಕ, ವಿಧಾನಸಭಾ ಅಧ್ಯಕ್ಷ ಶ್ರೀ ಯು.ಟಿ. ಖಾದರ್, ಸಚಿವರಾದ ಶ್ರೀ ರಹಿಂ ಖಾನ್ ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯವು ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೇರವಾಗಿ ಪ್ರಭಾವ ಬೀರುತ್ತವೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವು ಪ್ರತಿಯೊಬ್ಬನ ಬದುಕಿಗೆ ದಾರಿ ತೋರಿಸುವ ಬೆಳಕಾಗಬೇಕು. ಸಾಮಾಜಿಕ ಸೌಹಾರ್ದತೆ, ಭ್ರಷ್ಟಾಚಾರ ವಿರುದ್ಧ��� ಹೋರಾಟ ಹಾಗೂ ಜನಪರ ಆಡಳಿತಕ್ಕಾಗಿ ಬಸವಣ್ಣನವರ ವಚನಗಳು ಶಾಶ್ವತ ಮಾರ್ಗದರ್ಶಕರಾಗಿವೆ.
Tweet media one
Tweet media two
Tweet media three
Tweet media four
1
11
65
@eshwar_khandre
Eshwar Khandre
4 days
ಕಾರ್ಯಕ್ರಮದಲ್ಲಿ ಭಾಗವಹಿಸಲು ಬೀದರ್ ಜಿಲ್ಲೆಗೆ ಆಗಮಿಸಿದ ಮಾನ್ಯ ವಿಧಾನಸಭಾ ಅಧ್ಯಕ್ಷರು, ಆತ್ಮೀಯರಾದ ಶ್ರೀ ಯು.ಟಿ. ಖಾದರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು. @utkhader
Tweet media one
1
22
155
@eshwar_khandre
Eshwar Khandre
4 days
ಸುಮಾರು ₹6 ಕೋಟಿಗೂ ಅಧಿಕ ವಿಶೇಷ ಅನುದಾನದಡಿ ಭಾತಂಬ್ರಾ ಗ್ರಾಮದಿಂದ ಕಾಸರ್ ತೂಗಾವ್ ಗ್ರಾಮವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೇಥಿ ಮೇಳಕುಂದಾ ಬಳಿ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ರಸ್ತೆಗಳ ಉದ್ಘಾಟನೆಯನ್ನು ನೆರವೇರಿಸಿದೆನು. ✅ ₹4 ಕೋಟಿ 40 ಲಕ್ಷ ವೆಚ್ಚದಲ್ಲಿ ಭಾತಂಬ್ರಾ-ಕಾಸರ್ ತೂಗಾವ್ (ಮೇಥಿ, ಮೇಳಕುಂದಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ನೀಡುವ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಯಿತು. ✅ ₹1 ಕೋಟಿ 56 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡ ರಸ್ತೆಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ರಸ್ತೆಗಳ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುಗಮ ಸಂಚಾರದ ಅನುಕೂಲ ದೊರಕುವದಲ್ಲದೆ, ಭೌಗೋಳಿಕ ಸಂಪರ್ಕ ಸುಧಾರಣೆಯಾಗುವುದು ಮತ್ತು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದೆನು.
Tweet media one
Tweet media two
Tweet media three
Tweet media four
1
17
74
@eshwar_khandre
Eshwar Khandre
5 days
ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದೆನು. ಸಾವಯವ ಕೃಷಿ ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ, ಆರೋಗ್ಯಕರ ಆಹಾರದ ಉತ್ಪಾದನೆಗೂ ಸಹಕಾರಿಯಾಗುತ್ತದೆ. ಸಿರಿಧಾನ್ಯಗಳು ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದ್ದು, ಸಕ್ಕರೆ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ತಡೆಯಾಗಿ ಕಾರ್ಯನಿರ್ವಹಿಸಬಹುದು. ಸಾವಯವ ಕೃಷಿಯನ್ನು ಉತ್ತೇಜಿಸಲು ಸರ್ಕಾರವು ವಿವಿಧ ಪ್ರೋತ್ಸಾಹಧನ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದೆನು. ಯುವಕರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಲಭ್ಯತೆಯ ಬಗ್ಗೆ ಮಾಹಿತಿ ನೀಡುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟೆನು. ಈ ಮೇಳದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.
Tweet media one
Tweet media two
Tweet media three
Tweet media four
2
18
93
@eshwar_khandre
Eshwar Khandre
5 days
ಕಾವೇರಿ ನಿವಾಸದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಜೆಟ್ ಪೂರ್ವಸಭೆಯಲ್ಲಿ ಭಾಗವಹಿಸಿ, ನಮ್ಮ ಇಲಾಖೆಗೆ ಮತ್ತು ಬೀದರ ಜಿಲ್ಲೆಗೆ ಅಗತ್ಯವಿರುವ ಅನುದಾನ ಮತ್ತು ಕೈಗೊಳ್ಳಬೇಕಿರುವ ವಿವಿಧ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಜೊತೆಗಿದ್ದರು. #KarnatakaBudget2025
Tweet media one
Tweet media two
0
14
82
@eshwar_khandre
Eshwar Khandre
5 days
ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಕಲಬುರ್ಗಿಗೆ ತೆರಳುವ ಮಾರ್ಗದಲ್ಲಿ ಖನಿಜ ಸಂಪನ್ನ ಅರಣ್ಯ ಪ್ರದೇಶಗಳಾದ ಸಂಡೂರು ಮತ್ತು ಚಿತ್ರದುರ್ಗದ ಅವಲೋಕನ ಮಾಡಲಾಯಿತು. #KarnatakaForest #SaveForest #SaveEnvironment
Tweet media one
Tweet media two
Tweet media three
Tweet media four
31
29
279
@eshwar_khandre
Eshwar Khandre
7 days
ಮೂಡಾ ಪ್ರಕರಣದಲ್ಲಿ ಸಿಬಿಐ ತನಿಖೆ ಅನಗತ್ಯ ಎಂದು ಘನ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಶ್ರೀ @siddaramaiah ಅವರನ್ನು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲು ಪ್ರತಿಪಕ್ಷ ನಡೆಸಿದ ಸಂಚು ಇಡೀ ಜಗತ್ತಿಗೆ ತಿಳಿದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರ ತಪ್ಪು ಏನೂ ಇಲ್ಲ; ಅವರು ನಿರ್ದೋಷಿ ಆಗಿದ್ದಾರೆ, ದೋಷಮುಕ್ತರಾಗಿ ಮುಂದುವರಿಯುತ್ತಾರೆ. ಸತ್ಯಮೇವ ಜಯತೆ. @CMofKarnataka
Tweet media one
10
23
210
@eshwar_khandre
Eshwar Khandre
7 days
RT @SagarKhandre12: Chaining deported Indian citizens like criminals is unacceptable and a violation of human rights. The Indian government…
0
20
0
@eshwar_khandre
Eshwar Khandre
7 days
RT @INCKarnataka: ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ಹೆಚ್ಚಾಗಿ ನಾಡಿನಲ್ಲೇ ಸಂಚರಿಸುತ್ತಿವೆ. ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶಿ ನಿ…
0
22
0
@eshwar_khandre
Eshwar Khandre
9 days
ಕೊಡಗು, ಚಿಕ್ಕಮಗಳೂರು, ಹಾಸನ ಹಾಗು ಸುತ್ತಮುತ್ತ ಆನೆ-ಮಾನವ ಸಂಘರ್ಷ ತಡೆಗಟ್ಟಲು ದೆಶೀಯವಾಗಿ ಅಭಿವೃದ್ಧಿಪಡಿಸಿದ ‘ಕೆ.ಪಿ. ಟ್ರ್ಯಾಕರ್’ ರೇಡಿಯೋ ಕಾಲರ್ ಲೋಕಾರ್ಪಣೆ ಮಾಡಲಾಗಿದೆ. ಇದು ಆನೆಗಳ ಚಲನ ವಲನ ಗಮನಿಸಿ, ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಲು ಸಹಾಯ ಮಾಡಲಿದೆ. ಇದು ಹಗುರ, ಪರಿಸರ ಸ್ನೇಹಿ ಮತ್ತು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನ ಆಧಾರಿತ ಈ ಸಾಧನವು ವಿದೇಶಿ ಅವಲಂಬನೆ ಕಡಿಮೆ ಮಾಡಲಿದ್ದು, ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ ಆಗಲಿದೆ. ಶೀಘ್ರದಲ್ಲೇ ಹುಲಿ ಮತ್ತು ಚಿರತೆಗಳಿಗೂ ಈ ತಂತ್ರಜ್ಞಾನ ಅನ್ವಯಿಸಲಾಗುವುದು. #WildlifeConservation #KPTracker #KarnatakaForest
Tweet media one
Tweet media two
Tweet media three
2
9
36
@eshwar_khandre
Eshwar Khandre
9 days
Warm birthday wishes to our AICC National General Secretary (Org.), Shri @kcvenugopalmp ji May you be blessed with good health, happiness, and success always.
Tweet media one
0
5
28
@eshwar_khandre
Eshwar Khandre
9 days
It was an honor to participate in the @IndiaToday Environment Conclave 2025 and share insights on the urgent need for sustainable environmental policies to combat climate change, protect biodiversity, and ensure a greener future for our coming generations. Karnataka has been at the forefront of forest conservation, afforestation programs, and wildlife protection while maintaining a delicate balance between ecological preservation and economic growth. The path to a greener Karnataka and a healthier planet lies in collective responsibility and decisive action. Let us work together to safeguard our natural resources and leave behind a thriving environment for future generations. #IndiaTodayEnvironmentConclave #GreenKarnataka #SustainableFuture
Tweet media one
Tweet media two
Tweet media three
Tweet media four
1
7
39
@eshwar_khandre
Eshwar Khandre
10 days
RT @SagarKhandre12: ಮಾನ್ಯ ಹಣಕಾಸು ಸಚಿವೆ ಶ್ರೀಮತಿ. @nsitharaman ಅವರನ್ನು ಇಂದು ಭೇಟಿಯಾಗಿ ಎರಡು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದೆವು. ✅ ಎಲ್‌ಐಸಿ ಹಾ…
0
27
0
@eshwar_khandre
Eshwar Khandre
12 days
RT @SagarKhandre12: The increase in the income tax exemption limit up to ₹12 lakh is a welcome move that will provide some relief to the mi…
0
7
0
@eshwar_khandre
Eshwar Khandre
13 days
ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ. ✅ ರೈತರ ಮೇಲೆ ಬಜೆಟ್‌ನ ತಾರತಮ್ಯ: ಬಜೆಟ್‌ನಲ್ಲಿ ಎಂ.ಎಸ್.ಪಿ. (ಕನಿಷ್ಠ ಬೆಂಬಲ ಬೆಲೆ) ಕಾಯ್ದೆ ಕುರಿತು ಯಾವುದೇ ಘೋಷಣೆ ಮಾಡದಿರುವುದು ಅನ್ನದಾತರ ಮೇಲೆ ದೊಡ್ಡ ಅನ್ಯಾಯವಾಗಿದೆ. ರೈತರು ಬೆಳೆದ ಬೆಳೆಗೆ ಖಚಿತ ಬೆಲೆ ನಿರ್ಧಾರವಾಗಬೇಕೆಂಬ ಬಹುದಿನದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಪ್ರಕೃತಿ ವಿಕೋಪದ ಹೊಡೆತದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಕುರಿತು ಯಾವುದೇ ಘೋಷಣೆ ಇಲ್ಲ ಎಂಬುದು ವಿಷಾದನೀಯ. ✅ ಕಲ್ಯಾಣ ಕರ್ನಾಟಕದ ನಿರೀಕ್ಷೆಗಳನ್ನೂ ಹುಸಿಯಾಗಿಸಿದ ಕೇಂದ್ರ: ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ಅಸಡ್ಡೆ ತೋರಿಸಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ 7 ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ₹5000 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ ಎಂಬುದು ದೌರ್ಭಾಗ್ಯಕರ. ✅ ನಿರುದ್ಯೋಗ ನಿವಾರಣೆಗೆ ಯೋಗ್ಯ ಯೋಜನೆಗಳಿಲ್ಲ: ಇದೇ ಎನ್.ಡಿ.ಎ. ಆಡಳಿತದ 11 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟು ಉಲ್ಭಣಿಸಿದೆ, ಈ ಬಜೆಟ್‌ನಲ್ಲಿ ಯುವಕರ ಕೈಗೆ ಉದ್ಯೋಗ ನೀಡುವ ಯಾವುದೇ ಗಂಭೀರ ಯೋಜನೆ ರೂಪಿಸದಿರುವುದು ಖಂಡನಾರ್ಹ. ಬೇರೇಕಡೆ ಗಂಭೀರ ಯೋಜನೆಗಳನ್ನು ಘೋಷಿಸಿ, ಕರ್ನಾಟಕದ ಭಾಗ್ಯ ತಿರಸ್ಕರಿಸಿರುವುದು ಅಕ್ಷಮ್ಯ. ✅ ರಾಜ್ಯಗಳ ಜೊತೆ ತಾರತಮ್ಯ - ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರ ಎನ್.ಡಿ.ಎ.ಯೇತರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಗಳ ನಡುವೆ ರಾಜಕೀಯ ವ್ಯತ್ಯಾಸಗಳನ್ನು ಮೆಟ್ಟಿಲು ಮಾಡಿಕೊಳ್ಳುವ ನೀತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. #BudgetSession2025
Tweet media one
9
26
111
@eshwar_khandre
Eshwar Khandre
13 days
RT @KarnatakaVarthe: 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲಿ ರಾಜ್ಯದ ಹಕ್ಕೊತ್ತಾಯವನ್ನು ಮಂಡಿಸಿರುವ ಅರಣ್ಯ ಇಲಾಖೆ ಸಚಿವರಾದ @eshw
0
7
0