yvpatilinc Profile Banner
Yashwantraygouda Patil INC Profile
Yashwantraygouda Patil INC

@yvpatilinc

Followers
14
Following
0
Statuses
57

ಶಾಸಕರು,ಇಂಡಿ ವಿಧಾನಸಭಾ ಕ್ಷೇತ್ರ. Member of Legislative Assembly, Indi, Karnataka

indi karnataka
Joined December 2024
Don't wanna be here? Send us removal request.
@yvpatilinc
Yashwantraygouda Patil INC
3 hours
ಸೇನಾ ವಾಹನದಳ್ಳಿ ತೆರಳುತ್ತಿದ್ದ ಭಾರತೀಯ ಸೈನಿಕರು ಉಗ್ರರ ದಾಳಿಗೆ ಬಲಿಯಾದರು. ಅವರ ವೀರಮರಣ ದೇಶಕ್ಕೆ ಎಂದೂ ಭರಿಸಲಾಗದ ನಷ್ಟ. ಮಡಿದ ಎಲ್ಲ ಯೋಧರಿಗೂ ಶತ ಶತ ನಮನಗಳು. #PulwamaTerrorAttack
Tweet media one
0
0
0
@yvpatilinc
Yashwantraygouda Patil INC
4 days
ರಾಜ್ಯದ ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಾಲಿಗೆ 7,550/- ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಿದೆ. ಇದೊಂದು ಸಂತೋಷದ ಸುದ್ದಿಯಾಗಿದ್ದು, ಇದರ ಜೊತೆಗೆ 450/- ರೂಪಾಯಿಗಳ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಈ ಮೂಲಕ ನಮ್ಮ ಸರ್ಕಾರವು ರೈತಸ್ನೇಹಿ ಎಂದು ಮತ್ತೊಮ್ಮೆ ಸಾಬೀತಾಗಿದೆ.
Tweet media one
0
0
0
@yvpatilinc
Yashwantraygouda Patil INC
4 days
ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ. ಇಂತಹ ಮಹಾಶರಣರಿಗೆ ಹೃತ್ಪೂರ್ವಕ ನಮನಗಳು.
Tweet media one
0
0
0
@yvpatilinc
Yashwantraygouda Patil INC
8 days
ಸಂಗೀತ ಲೋಕದ ದ��ತಕತೆ, 36 ಭಾಷೆಗಳಲ್ಲಿ ತಮ್ಮ ಗಾನಸುದೆ ಹರಿಸುವ ಮೂಲಕ ದೇಶದ ಜನರ ಮನದಲ್ಲಿ ನೆಲೆಯಾಗಿದ್ದ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
Tweet media one
0
0
0
@yvpatilinc
Yashwantraygouda Patil INC
16 days
ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ಯಾವುದೇ ತುರ್ತುಪರಿಸ್ಥಿತಿಗೆ ಸ್ಪಂದಿಸಲು ಮೇಲೆ ನೀಡಿರುವ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. #MahaKumbhMela2025 #KumbhaMela
Tweet media one
0
0
0
@yvpatilinc
Yashwantraygouda Patil INC
18 days
ಇಂಡಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದ ವೇಳೆ ಬುಡಕಟ್ಟು ಜನಾಂಗದ ಉಡುಪು ಧರಿಸಿ ನೃತ್ಯ ಮಾಡಿದ ಆ್ಯಪಲ್​ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದ ಕ್ಷಣ..
Tweet media one
0
0
0
@yvpatilinc
Yashwantraygouda Patil INC
18 days
ಇಂಡಿ ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಭಾರತವಿಂದು ವಿಶ್ವಮಟ್ಟದಲ್ಲಿ ಯಶಸ್ವಿ ರಾಷ್ಟ್ರ ಎಂದು ಕರೆಯಿಸಿಕೊಳ್ಳುವುದರ ಹಿಂದೆ ಪ್ರಜಾಪ್ರಭುತ್ವ ಕೂಡ ಒಂದು ಕಾರಣ. ಡಾ. ಬಿ.ಆರ್​ ಅಂಬೇಡ್ಕರ್​ ಅವರು ನೀಡಿದ ಕೊಡುಗೆ ಸಂವಿಧಾನದ ಆಶಯದಂತೆ ಸಮನ್ವಯದ ಜೀವನ ನಡೆಸೋಣ .
Tweet media one
0
0
0
@yvpatilinc
Yashwantraygouda Patil INC
18 days
ಇಂಡಿ ತಾಲೂಕಿನ ಬಬಲಾದ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಮಾತನಾಡಿದೆ.
Tweet media one
Tweet media two
Tweet media three
Tweet media four
0
0
0
@yvpatilinc
Yashwantraygouda Patil INC
18 days
ಚಡಚಣ ನಗರದಲ್ಲಿ ನಡೆದ ಶ್ರೀ ರಾಜಶೇಖರ ಡೋಣಗಾಂವ ಅವರ ನೂತನ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ರಾಜಶೇಖರ ಅವರ ನೂತನ ನಿವಾಸದಲ್ಲಿ ಸದಾ ಸುಖ - ಸಂತೋಷ ನೆಲೆಸಲಿ ಎಂದು ಹಾರೈಸಿದೆ. #yashwantrayagoudapatil #indi #vijayapura
Tweet media one
Tweet media two
Tweet media three
0
0
0
@yvpatilinc
Yashwantraygouda Patil INC
18 days
ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶವನ್ನು ನೀಡಿ, ಶೋಷಣೆ ಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸಂವಿಧಾನದ ಪಾತ್ರ ಬಹಳ ಮುಖ್ಯವಾದದ್ದು. ಪ್ರಜೆಯೇ ಪ್ರಭು ಎಂಬ ಭಾರತೀಯ ಸಂವಿಧಾನವನ್ನು ಅಂಗೀಕರಿಸಿ, ಶಾಸನವನ್ನಾಗಿ ಒಪ್ಪಿಕೊಂಡ ದಿನವನ್ನು ಸಂಭ್ರಮಿಸಿದ ಬಗೆಯ ಕಿರುನೋಟ ಇಲ್ಲಿದೆ...
0
0
0
@yvpatilinc
Yashwantraygouda Patil INC
19 days
ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದೆ. ಇಂಡಿ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಮಾತನಾಡಿದೆ.
Tweet media one
Tweet media two
Tweet media three
0
0
0
@yvpatilinc
Yashwantraygouda Patil INC
19 days
76ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
Tweet media one
Tweet media two
Tweet media three
Tweet media four
0
0
0
@yvpatilinc
Yashwantraygouda Patil INC
20 days
ದೇಶ ಸುತ್ತು ಕೋಶ ಓದು ಎಂಬಂತೆ ಪ್ರವಾಸವೂ ಜ್ಞಾನಾರ್ಜನೆಯ ಉತ್ತಮ ಮಾರ್ಗ. ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ, ಭೌಗೋಳಿಕ ವೈವಿಧ್ಯತೆಯನ್ನು ಪ್ರವಾಸಗಳ ಮೂಲಕ ಅರಿಯೋಣ. ಸರ್ವರಿಗೂ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. #NationalTourismDay2025
Tweet media one
0
0
1
@yvpatilinc
Yashwantraygouda Patil INC
20 days
ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ. ಸರ್ವರಿಗೂ ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು. #NationalVotersDay
Tweet media one
0
0
0
@yvpatilinc
Yashwantraygouda Patil INC
21 days
ಪಂಡಿತ ಭೀಮಸೇನ ಗುರುರಾಜ ಜೋಶಿಯವರು ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರಾದ ಪಂಡಿತ್ ಭೀಮಸೇನ ಜೋಶಿಯವರ ಪುಣ್ಯಸ್ಮರಣೆಯಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ.
Tweet media one
0
0
1
@yvpatilinc
Yashwantraygouda Patil INC
21 days
ಮನುಕುಲದ ಪೀಳಿಗೆ ಮುಂದುವರಿಯಬೇಕು ಎಂದರೆ ಹೆಣ್ಣಿನ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿ ಅವರನ್ನು ಆಗ��ದೆತ್ತರಕ್ಕೆ ಬೆಳೆಯಲು ಬಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸರ್ವರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಾರ್ದಿಕ ಶುಭಾಶಯಗಳು.
Tweet media one
0
0
0
@yvpatilinc
Yashwantraygouda Patil INC
22 days
ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೆಸ್​ ಸಮಾವೇಶವು ಶತಕ ಪೂರೈಸಿದ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮ ನಡೆಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ರಾಷ್ಟ್ರಪಿತನ ಬೃಹತ್​ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಕ್ಷಣದ ಕಿರುನೋಟ ಇಲ್ಲಿದೆ...
0
0
1
@yvpatilinc
Yashwantraygouda Patil INC
22 days
2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಯಕ್ರಮದಡಿಯಲ್ಲಿ ಅನುಮೋದನೆಯಾದ ಇಂಡಿ ತಾಲೂಕಿನ ರಾಮತೀರ್ಥ ಎಲ್​​.ಟಿಯಲ್ಲಿ ಅಂದಾಜು 10 ಲಕ್ಷ ರೂಪಾಯಿಗಳ ಮೌಲ್ಯದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ನನ್ನ ಅನುಪಸ್ಥಿತಿಯಲ್ಲಿ ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿದರು. #yashwantrayagoudapatil #indi #vijayapura
Tweet media one
0
0
0
@yvpatilinc
Yashwantraygouda Patil INC
22 days
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಅಡಿಯಲ್ಲಿ ಇಂಡಿ ತಾಲೂಕಿನ ಇಂಡಿ ಅಗರಖೇಡ ಮುಖ್ಯರಸ್ತೆಯಿಂದ ನೆಹರೂ ನಗರದವರೆಗೆ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದಲ್ಲಿ ಕೂಡು ರಸ್ತೆ ಸುಧಾರಣೆ ಕಾಮಗಾರಿಗೆ ನನ್ನ ಅನುಪಸ್ಥಿತಿಯಲ್ಲಿ ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿದರು. #yashwantrayagoudapatil #indi #vijayapura
Tweet media one
0
0
0