narayanagowdru Profile Banner
ನಾರಾಯಣಗೌಡ್ರು.ಟಿ.ಎ | ‌Narayanagowdru T.A. Profile
ನಾರಾಯಣಗೌಡ್ರು.ಟಿ.ಎ | ‌Narayanagowdru T.A.

@narayanagowdru

Followers
15K
Following
21
Statuses
3K

ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Karnataka
Joined October 2010
Don't wanna be here? Send us removal request.
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 month
ಪ್ರೀತಿ, ಸಂಭ್ರಮ, ಆರೋಗ್ಯ, ಯಶಸ್ಸು, ನೆಮ್ಮದಿ ತುಂಬಿದ ವರ್ಷ ಇದಾಗಲಿ. 2025 ನಿಮ್ಮೆಲ್ಲರ ಬದುಕಲ್ಲಿ ಹೊಸ ಉತ್ಸಾಹವನ್ನು, ಚೈತನ್ಯವನ್ನು ತರಲಿ. ನಿಮ್ಮ ಕನಸುಗಳಿಗೆ ಹೊಸ ರೆಕ್ಕೆಗಳು ದಕ್ಕಲಿ. ಅಂದುಕೊಂಡಿದ್ದೆಲ್ಲ ಸಾಕಾರವಾಗಲಿ. ಜಗತ್ತಿನ ಎಲ್ಲ ನೆಚ್ಚಿನ ಕನ್ನಡಿಗರಿಗೂ ಹೊಸ ವರ್ಷದ ಶುಭಾಶಯಗಳು.
Tweet media one
5
12
101
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
14 days
ಕನ್ನಡದ ತಾಯಿ ಭುವನೇಶ್ವರಿಯ ಮೂರ್ತಿ ಅನಾವರಣದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು @siddaramaiah ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದಾರೆ. ಈ ಅಭೂತಪೂರ್ವ ನಿರ್ಣಯ ಕೈಗೊಂಡಿದ್ದಕ್ಕಾಗಿ ಎಲ್ಲ ಕನ್ನಡಪರ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ @DKShivakumar ಅವರಿಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ @DrParameshwara ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಅಪಾರವಾದ ಕನ್ನಡಾಭಿಮಾನದಿಂದ 'ಕನ್ನಡ ರಾಮಯ್ಯ' ಎನ್ನಿಸಿಕೊಂಡವರು. ಕನ್ನಡ ನಾಮಫಲಕ ಹೋರಾಟದ ಸಂದರ್ಭದಲ್ಲಿ ನಾನು ಹದಿನಾರು ದಿನಗಳ ಕಾಲ ಜೈಲುವಾಸ ಅನುಭವಿಸಿದೆ, ನನ್ನ ಮೇಲೆ ಒಂದೇ ದಿನ ಹದಿನಾರು ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಸಿದ್ಧರಾಮಯ್ಯನವರು ಕಾಯ್ದೆಯನ್ನು ರೂಪಿಸಿ ಜಾರಿಮಾಡಿದ್ದು ನಮ್ಮ ನೋವನ್ನು ಮರೆಯಿಸಿತು‌‌. ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆ ತಡೆಯುವ ನಮ್ಮ ಹೋರಾಟ ಯಶಸ್ವಿಯಾಗಿದ್ದೂ ಸಹ ಸಿದ್ಧರಾಮಯ್ಯನವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ. ಕನ್ನಡನಾಡು ಸಿದ್ಧರಾಮಯ್ಯನವರಿಂದ ಇನ್ನಷ್ಟು ನಿರೀಕ್ಷಿಸುತ್ತಿದೆ. ಇನ್ನಷ್ಟು ಕನ್ನಡದ ಕೆಲಸಗಳು ಅವರಿಂದ ಆಗಬೇಕಿದೆ. ಕನ್ನಡಿಗರ ಬದುಕನ್ನು ಹೊರರಾಜ್ಯದಿಂದ ಬಂದವರು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದ ಉದ್ಯಮಗಳು, ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ಸಮರ್ಪಕವಾದ ಕಾಯ್ದೆ ರೂಪಿಸಿಬೇಕಿದೆ. ಬಹುಶಃ ಸಿದ್ಧರಾಮಯ್ಯ ಅವರು ಈ ಕಾರ್ಯವನ್ನು ಈಗ ಮಾಡದಿದ್ದರೆ ಮುಂದೆ ಇನ್ನ್ಯಾರೋ ಬಂದು ಇದನ್ನೆಲ್ಲ ಮಾಡುವರೆಂಬ ನಂಬಿಕೆ ನನಗಿಲ್ಲ. ಇವತ್ತು ಕನ್ನಡದ ಕುಲದೇವತೆ ಭುವನೇಶ್ವರಿಯ ಸನ್ನಿದಾನದಲ್ಲೇ ಕನ್ನಡಪರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕ ಪಡೆಯುವುದಾಗಿ ಅವರು ಘೋಷಿಸಿದ್ದಾರೆ. ಆ ತಾಯಿಯ ಎದುರು ಆಡಿದ ಮಾತು ಸುಳ್ಳಾಗಬಾರದು. ಹಿಂದೆ ಹಲವು ಮುಖ್ಯಮಂತ್ರಿಗಳು, ಗಹಸಚಿವರು ಇಂಥ ಮಾತನ್ನಾಡಿ ಅದನ್ನು ಉಳಿಸಿಕೊಳ್ಳಲಿಲ್ಲ. ಈಗ ಹಾಗೆ ಆಗದಿರಲಿ. ಕೊಟ್ಟ ಮಾತು ತಪ್ಪದಿರಲಿ. ಹಾಗೆಯೇ ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕಾಳಜಿಯ ಕನ್ನಡಪ್ರೇಮಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಏನೇನು ಸಾಧ್ಯವೋ ಅದನ್ನೆಲ್ಲ ಅವರು ಮಾಡಲಿ ಎಂದು ಮನವಿ ಮಾಡುತ್ತೇನೆ.
30
124
712
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
27 days
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರ ಬದುಕು ಎಳ್ಳು, ಬೆಲ್ಲದ ಸಿಹಿಯಲ್ಲಿ ಅರಳಿಕೊಳ್ಳಲಿ ಎಂದು ಹಾರೈಸುತ್ತೇನೆ. ಕನ್ನಡಿಗರೂ ಒಂದು ಸಂಕ್ರಮಣದ ಕಾಲಘಟ್ಟದಲ್ಲಿ ಹಾದುಹೋಗುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಮಕರ ಸಂಕ್ರಾಂತಿಯ ಈ ಸಂದರ್ಭದಲ್ಲಿ  ರಕ್ಷಣಾ ವೇದಿಕೆಯ ನನ್ನೆಲ್ಲ ಕಾರ್ಯಕರ್ತರಿಗೆ ದೊಡ್ಡ ಸವಾಲೊಂದನ್ನು ನೀಡುತ್ತಿದ್ದೇನೆ. ಮುಂದಿನ ಸಂಕ್ರಾಂತಿಯೊಳಗೆ ಮೂರು ಮುಖ್ಯ ವಿಷಯಗಳು ನಿಮ್ಮ ಚಳವಳಿಯ ವಿಷಯವಾಗಬೇಕು. ಈ ಮೂರು ಹಕ್ಕೊತ್ತಾಯಗಳು ಈಡೇರುವವರೆಗೆ ನೀವು ವಿರಮಿಸಬಾರದು. ಈ‌ ಚಳವಳಿಯಿಂದ ಏನೇ ಸಮಸ್ಯೆ ಬಂದರೂ ಧೃತಿಗೆಡದೆ ಕನ್ನಡಿಗರ ಬಹುಕಾಲದ ಬೇಡಿಕೆಗಳು ಈಡೇರುವಂತೆ ನೋಡಿಕೊಳ್ಳಬೇಕು. 1. ಕರ್ನಾಟಕದಲ್ಲಿ ಮಾರಾಟವಾಗುವ/ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿದೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಮಾನ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು. 2. ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು. 3. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ‌. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಈ ಮೂರು ಹಕ್ಕೊತ್ತಾಯಗಳು ಈಡೇರಲು ಗ್ರಾಮಮಟ್ಟದಿಂದ, ರಾಜಧಾನಿಯವರೆಗೆ ದೊಡ್ಡ ಮಟ್ಟದ ಚಳವಳಿ ಹಮ್ಮಿಕೊಳ್ಳಲು ನನ್ನ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ. ಕನ್ನಡದ ಸಮಸ್ತ ಜನತೆ ಈ ಚಳವಳಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. 2023ರ ಡಿಸೆಂಬರ್ 27ರಂದು ಕರವೇ ಸಂಘಟಿಸಿದ ಐತಿಹಾಸಿಕ ನಾಮಫಲಕ ಚಳವಳಿಯನ್ನು ಯಶಸ್ವಿಗೊಳಿಸಿದ ಹಾಗೆಯೇ ಕರವೇ ಕಟ್ಟಾಳುಗಳು ಜೀವದ ಹಂಗು ತೊರೆದು ಹೋರಾಡಿ ಈ ಹೋರಾಟವನ್ನೂ ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸ ನನ್ನದು. ನಮ್ಮ ಈ ಮೂರು ಹಕ್ಕೊತ್ತಾಯಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು, ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸೋಣ. ಮುಂದಿನ ಮಕರ ಸಂಕ್ರಾಂತಿಯೊಳಗೆ ಈ ಹಕ್ಕೊತ್ತಾಯಗಳು ಈಡೇರುವಂತೆ ನೋಡಿಕೊಳ್ಳೋಣ. ಕರ್ನಾಟಕ ರಕ್ಷಣಾ ವೇದಿಕೆ‌ ಏರ್ಪಡಿಸಿದ್ದ ಕರ್ನಾಟಕ ಹೆಸರು ನಾಮಕರಣದ ನೆನಪಿನ "ಹೆಸರಾಯಿತು ಕರ್ನಾಟಕ" ಸಮಾವೇಶದಲ್ಲಿ ನನ್ನ ಎಲ್ಲ ಮುಖಂಡರಿಗೆ ಕನ್ನಡಕ್ಕಾಗಿ, ಕನ್ನಡಿಗರ ಏಳಿಗೆಗಾಗಿ, ಕರ್ನಾಟಕದ ರಕ್ಷಣೆಗಾಗಿ ಎಂಥದ್ದೇ ಕಷ್ಟ ಬಂದರೂ ಎದೆಗುಂದದೆ ಎದುರಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದೆ. ಆ ಪ್ರತಿಜ್ಞೆಯಂತೆ ಎಲ್ಲರೂ ನಡೆಯೋಣ.
2
10
44
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
27 days
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರ ಬದುಕು ಎಳ್ಳು, ಬೆಲ್ಲದ ಸಿಹಿಯಲ್ಲಿ ಅರಳಿಕೊಳ್ಳಲಿ ಎಂದು ಹಾರೈಸುತ್ತೇನೆ. ಕನ್ನಡಿಗರೂ ಒಂದು ಸಂಕ್ರಮಣದ ಕಾಲಘಟ್ಟದಲ್ಲಿ ಹಾದುಹೋಗುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಮಕರ ಸಂಕ್ರಾಂತಿಯ ಈ ಸಂದರ್ಭದಲ್ಲಿ  ರಕ್ಷಣಾ ವೇದಿಕೆಯ ನನ್ನೆಲ್ಲ ಕಾರ್ಯಕರ್ತರಿಗೆ ದೊಡ್ಡ ಸವಾಲೊಂದನ್ನು ನೀಡುತ್ತಿದ್ದೇನೆ. ಮುಂದಿನ ಸಂಕ್ರಾಂತಿಯೊಳಗೆ ಮೂರು ಮುಖ್ಯ ವಿಷಯಗಳು ನಿಮ್ಮ ಚಳವಳಿಯ ವಿಷಯವಾಗಬೇಕು. ಈ ಮೂರು ಹಕ್ಕೊತ್ತಾಯಗಳು ಈಡೇರುವವರೆಗೆ ನೀವು ವಿರಮಿಸಬಾರದು. ಈ‌ ಚಳವಳಿಯಿಂದ ಏನೇ ಸಮಸ್ಯೆ ಬಂದರೂ ಧೃತಿಗೆಡದೆ ಕನ್ನಡಿಗರ ಬಹುಕಾಲದ ಬೇಡಿಕೆಗಳು ಈಡೇರುವಂತೆ ನೋಡಿಕೊಳ್ಳಬೇಕು. 1. ಕರ್ನಾಟಕದಲ್ಲಿ ಮಾರಾಟವಾಗುವ/ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿದೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಮಾನ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು. 2. ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು. 3. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತ�� ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ‌. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಈ ಮೂರು ಹಕ್ಕೊತ್ತಾಯಗಳು ಈಡೇರಲು ಗ್ರಾಮಮಟ್ಟದಿಂದ, ರಾಜಧಾನಿಯವರೆಗೆ ದೊಡ್ಡ ಮಟ್ಟದ ಚಳವಳಿ ಹಮ್ಮಿಕೊಳ್ಳಲು ನನ್ನ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ. ಕನ್ನಡದ ಸಮಸ್ತ ಜನತೆ ಈ ಚಳವಳಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. 2023ರ ಡಿಸೆಂಬರ್ 27ರಂದು ಕರವೇ ಸಂಘಟಿಸಿದ ಐತಿಹಾಸಿಕ ನಾಮಫಲಕ ಚಳವಳಿಯನ್ನು ಯಶಸ್ವಿಗೊಳಿಸಿದ ಹಾಗೆಯೇ ಕರವೇ ಕಟ್ಟಾಳುಗಳು ಜೀವದ ಹಂಗು ತೊರೆದು ಹೋರಾಡಿ ಈ ಹೋರಾಟವನ್ನೂ ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸ ನನ್ನದು. ನಮ್ಮ ಈ ಮೂರು ಹಕ್ಕೊತ್ತಾಯಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು, ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸೋಣ. ಮುಂದಿನ ಮಕರ ಸಂಕ್ರಾಂತಿಯೊಳಗೆ ಈ ಹಕ್ಕೊತ್ತಾಯಗಳು ಈಡೇರುವಂತೆ ನೋಡಿಕೊಳ್ಳೋಣ. ಕರ್ನಾಟಕ ರಕ್ಷಣಾ ವೇದಿಕೆ‌ ಏರ್ಪಡಿಸಿದ್ದ ಕರ್ನಾಟಕ ಹೆಸರು ನಾಮಕರಣದ ನೆನಪಿನ "ಹೆಸರಾಯಿತು ಕರ್ನಾಟಕ" ಸಮಾವೇಶದಲ್ಲಿ ನನ್ನ ಎಲ್ಲ ಮುಖಂಡರಿಗೆ ಕನ್ನಡಕ್ಕಾಗಿ, ಕನ್ನಡಿಗರ ಏಳಿಗೆಗಾಗಿ, ಕರ್ನಾಟಕದ ರಕ್ಷಣೆಗಾಗಿ ಎಂಥದ್ದೇ ಕಷ್ಟ ಬಂದರೂ ಎದೆಗುಂದದೆ ಎದುರಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದೆ. ಆ ಪ್ರತಿಜ್ಞೆಯಂತೆ ಎಲ್ಲರೂ ನಡೆಯೋಣ. ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
8
17
63
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಜಾಗತೀಕರಣದ ಕಾಲಘಟ್ಟದಲ್ಲಿ ತಮ್ಮ ಅಸಮಾನ್ಯ ಬುದ್ಧಿಮತ್ತೆ ಮತ್ತು ಕ್ರಿಯಾಶೀಲತೆಯಿಂದ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಿಸಿದ ಹೊಸ ಭಾರತದ ಶಿಲ್ಪಿ, ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಅಗಲಿಕೆಯಿಂದ ಒಂದು ಯುಗದ ಅಂತ್ಯವಾದಂತಾಗಿದೆ. ದೇಶಕ್ಕೆ ನೀವು ಸಲ್ಲಿಸಿದ ಸೇವೆಯನ್ನು ಸದಾ ಸ್ಮರಿಸುತ್ತೇವೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಸದಾ ಚಿರಸ್ಥಾಯಿಯಾಗಿರಲಿದೆ. ಹೋಗಿ ಬನ್ನಿ, ನಿಮಗೆ‌ ಭಾವಪೂರ್ಣ ಶ್ರದ್ಧಾಂಜಲಿಗಳು. #ManmohanSingh #Manmohan #RIP
Tweet media one
1
18
195
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ತರೆಂದರೆ ಪ್ರೀತಿ, ಕರುಣೆ, ತ್ಯಾಗ. ಮನುಕುಲವನ್ನು ಬಾಧಿಸುತ್ತಿರುವ ಎಲ್ಲ ಸಂಕಷ್ಟಗಳಿಗೆ ಕ್ರಿಸ್ತರ ಬದುಕು, ಚಿಂತನೆಗಳು ದಾರಿ ದೀಪವಾಗಲಿ.
Tweet media one
2
10
68
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಕನ್ನಡದ ಹೆಮ್ಮೆಯ ಹೋರಾಟಗಾರ, ಯಶಸ್ವಿ ಪತ್ರಿಕೋದ್ಯಮಿ ಟಿ. ವೆಂಕಟೇಶ್ ಕನ್ನಡ ಹೋರಾಟಗಾರರಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಸಿದವರು. ಇವತ್ತು ನಾಡಿನ ದೊಡ್ಡ ಉದ್ಯಮಿಯಾಗಿ ಹಾಗೂ ಸ್ವಾಭಿಮಾನಿ ಕನ್ನಡಿಗರ ಸಮೂಹ ಸಂಸ್ಥೆಗಳ ನೇತಾರರಾಗಿದ್ದಾರೆ. ನನ್ನ ಅಣ್ಣನ ಸಮಾನರಾದ ಟಿ.ವೆಂಕಟೇಶ್ ದಂಪತಿಗಳಿಗೆ ಮದುವೆಯಾಗಿ 50 ವರ್ಷ ಹಾಗು ವೆಂಕಟೇಶ್ ಅವರ 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೆ. ಇವರ ಕುಟುಂಬಕ್ಕೆ ತಾಯಿ ರಾಜರಾಜೇಶ್ವರಿ ಇನ್ನಷ್ಟು ಆರೋಗ್ಯ, ಐಶ್ವರ್ಯ ಕೊಡಲಿ ಎಂದು ಕನ್ನಡಿಗರ ಪರವಾಗಿ ತುಂಬು ಹೃದಯದಿಂದ ಹಾರೈಸುವೆ.
Tweet media one
2
14
232
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ನಿಶ್ಚಿತವಾಗಿಯೂ ಅವರಿಗೆ ಇರುವ ಅನಾರೋಗ್ಯ ಆದಷ್ಟು ಬೇಗನೇ ದೂರವಾಗಿ ನಗುನಗುತ್ತ ಬರುತ್ತಾರೆ. ಅವರ ಆಗಮನಕ್ಕಾಗಿ ಕರ್ನಾಟಕದ ಜನತೆ ಪ್ರೀತಿ, ಕಾಳಜಿಯಿಂದ ಕಾಯುತ್ತದೆ. ಶಿವಣ್ಣ ಕನ್ನಡದ ಅತ್ಯುತ್ತಮ ನಟ ಮಾತ್ರವಲ್ಲ, ಮಾನವೀಯ ಗುಣಗಳು ತುಂಬಿರುವ ಬಂಗಾರದ ಮನಸಿನ ಅಪ್ಪಟ ಮನುಷ್ಯ. ಎಷ್ಟು ಎತ್ತರಕ್ಕೆ ಏರಿದರೂ ಕೀರ್ತಿಶನಿಯನ್ನು ಹೆಗಲಿಗೇರಿಸಿಕೊಳ್ಳದೆ ವಿನಯವನ್ನೇ ಮೈಗೂಡಿಸಿಕೊಂಡ ಅಪರೂಪದ ಜೀವ. ಅವರಿಗೆ ಬಂದಿರುವ ಅನಾರೋಗ್ಯದ ಸಂಕಟ ತಾತ್ಕಾಲಿಕವಷ್ಟೆ. ಅವರು ಮರಳಿ ಬಂದು ಇನ್ನೂ ನೂರಾರು ಸಿನಿಮಾಗಳನ್ನು ಮಾಡುತ್ತಾರೆಂಬ ನಂಬುಗೆ ನನ್ನದು. ಶಿವಣ್ಣ, ನಿಮ್ಮೊಂದಿಗೆ ಇಡೀ ಕರ್ನಾಟಕದ ಜನತೆ ಇದೆ, ಇಡೀ‌ ಸಿನಿಮಾ ಸಮೂಹವಿದೆ. ಧೈರ್ಯದಿಂದ ಚಿಕಿತ್ಸೆ ಮುಗಿಸಿಕೊಂಡು ನಗುನಗುತ್ತ ಬೇಗ ಬಂದುಬಿಡಿ. ನಿಮಗಾಗಿ ಕಾಯುತ್ತಿರುತ್ತೇವೆ.
Tweet media one
Tweet media two
3
46
610
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಕನ್ನಡ ಸಾಹಿತ್ಯ ಸಮ್ಮೇಳನ: ಈ ವಿಷಯಗಳೂ ಚರ್ಚೆಯಾಗಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ. ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತಿಗಳಲ್ಲದವರನ್ನು ಮಾಡಲು ಹೊರಟಿದ್ದ ಕನ್ನಡ ಸಾಹಿತ್ಯ ಪರಿಷತ್ ಅಂಥ ದುಸ್ಸಾಹಸವನ್ನೇನು ಮಾಡದೇ ಇರುವುದು ಸಮಾಧಾನದ ವಿಷಯ. ಕನ್ನಡ ಸಾಹಿತ್ಯ, ಸಂಶೋಧನೆ ಕ್ಷೇತ್ರಕ್ಕೆ ಅದ್ಭುತವಾದ ಕೊಡುಗೆಗಳನ್ನು ಕೊಟ್ಟಿರುವ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆಯಲೆಂದು ಹಾರೈಸುವೆ. ಕನ್ನಡ ಸಾಹಿತ್ಯ ಪರಿಷತ್ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ಅನೇಕ ಪ್ರಾತಃಸ್ಮರಣೀಯರು ಕಟ್ಟಿದ ಸಂಸ್ಥೆ. ಅದಕ್ಕೊಂದು ಭವ್ಯವಾದ ಇತಿಹಾಸವಿದೆ. ಆ ಕಾಲದಿಂದಲೂ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲಾಗುತ್ತದೆ. ಅನೇಕ ಮಹಾನ್ ಸಾಹಿತಿಗಳು ಕಸಾಪ ತೇರನ್ನು ಎಳೆಯುತ್ತ ಬಂದಿದ್ದಾರೆ. ಅದು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೂ ತನ್ನದೇ ಆದ ಹಿರಿಮೆ ಇದೆ, ಗರಿಮೆ ಇದೆ. ಈ ಕಾರಣಕ್ಕಾಗಿಯೇ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಮ್ಮೇಳನಕ್ಕೆ ಅಪಾರ ಪ್ರಮಾಣದ ಹಣದ ಅನುದಾನ ನೀಡುತ್ತದೆ. ಇದೆಲ್ಲವೂ ಸರಿಯೇ ಹೌದು. ಆದರೆ ನಾವು ಈ ಹೊತ್ತಿನಲ್ಲಿ ಕೇಳಿಕೊಳ್ಳಲೇಬೇಕಾದ ಹಲವು ಪ್ರಶ್ನೆಗಳಿವೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಕನ್ನಡಿಗರು ಸೇರುತ್ತಾರೆ, ಸಂಭ್ರಮಿಸುತ್ತಾರೆ. ಸಾಹಿತ್ಯ ಸಮ್ಮೇಳನ ಅಕ್ಷರಶಃ ಕನ್ನಡದ ಜಾತ್ರೆಯೇ ಆಗಿಹೋಗಿದೆ. ಆದರೆ ಇಷ್ಟಾದರೆ ಸಾಕೇ? ಇದಕ್ಕೆ ಹೊರತಾಗಿ ಈ ಸಮ್ಮೇಳನಗಳ ಹೊಣೆಗಾರಿಕೆ ಏನು? ಸಮ್ಮೇಳನ ಕೇವಲ ಸಂಭ್ರಮದ ಜಾತ್ರೆಯಾಗಿ ಉಳಿಯಬೇಕೆ ಅಥವಾ ಅದಕ್ಕೆ ಮೀರಿದ್ದನ್ನು ಸಾಧಿಸಲು ಸಾಧ್ಯವಿಲ್ಲವೇ? ಮೂರು ದಿನಗಳ ಸಂಭ್ರಮದಲ್ಲಿ ಹಲವು ಬಗೆಯ ವಿಚಾರಗೋಷ್ಠಿಗಳು ನಡೆಯುತ್ತದೆ. ಸಮಕಾಲೀನ ಸಂಗತಿಗಳ ಕುರಿತಾಗಿ ಮಹತ್ವದ ಚರ್ಚೆಗಳು ನಡೆಯುತ್ತವೆ. ಇದೆಲ್ಲ ಆದ ನಂತರ ಸಮ್ಮೇಳನದಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ನಿರ್ಣಯಗಳನ್ನು ಸರ್ಕಾರಕ್ಕೂ ಸಲ್ಲಿಸಲಾಗುತ್ತದೆ. ಆದರೆ ಇದುವರೆಗೆ ಕಸಾಪ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನವಾಗಿದೆಯೇ? ಎಲ್ಲ ನಿರ್ಣಯಗಳ ವಿಷಯ ಹಾಗಿರಲಿ, ಕೆಲವಾದರೂ ನಿರ್ಣಯಗಳನ್ನು ಸರ್ಕಾರಗಳು ಅನುಷ್ಠಾನಗೊಳಿಸಿವೆಯೇ? ಇಲ್ಲವಾದಲ್ಲಿ ಪ್ರತಿ ಸಮ್ಮೇಳನದಲ್ಲೂ ಇಂಥ ನಿರ್ಣಯಗಳನ್ನು ಅಂಗೀಕರಿಸುವ ಅಗತ್ಯವಾದರೂ ಏನು? ನಿರ್ಣಯಗಳ ಮಂಡನೆ ಅನ್ನುವುದು ಕೇವಲ ಒಂದು ಸಂಪ್ರದಾಯವಾಗಿ ಉಳಿಯುವುದಾದರೆ ಸಾಹಿತ್ಯಸಮ್ಮೇಳನಕ್ಕಾಗಲೀ, ಪರಿಷತ್ ಗಾಗಿ ಯಾವ ಗೌರವ ಉಳಿಯುತ್ತದೆ? ಕಸಾಪ ಅಂಗೀಕರಿಸುವ ನಿರ್ಣಯಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಆಗುವುದಿಲ್ಲವಾದರೆ ಅದು ಕೋಟ್ಯಂತರ ರುಪಾಯಿ ಅನುದಾನವನ್ನೇಕೆ ಕೊಡುತ್ತದೆ? ಮುಖ್ಯಮಂತ್ರಿಗಳಾದಿಯಾಗಿ ಸಚಿವ ಸಂಪುಟದ ಮಂತ್ರಿಗಳು, ಶಾಸಕರು ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ವಿಜೃಂಭಿಸುವುದಕ್ಕಾದರೂ ಏನು ಅರ್ಥವಿರುತ್ತದೆ? ಇದೆಲ್ಲದರ ನಡುವೆ ಕನ್ನಡ ಸಾಹಿತ್ಯ ಪರಿಷತ್ ತನ್ನ ಗೊತ್ತುಗುರಿಗಳಿಂದ ವಿಮುಖವಾಗುತ್ತಿದೆಯೇನೋ ಎಂಬ ಅನುಮಾನವೂ ನನ್ನನ್ನು ಕಾಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ ಪಡೆಯುವ ಅಗತ್ಯವಾದರೂ ಏನಿತ್ತು? ಪರಿಷತ್ ಯಾವತ್ತಿಗೂ ಸರ್ಕಾರದ ಅಥವಾ ಇನ್ಯಾವುದೇ ಸಂಸ್ಥೆಯ ಹಂಗಿನಲ್ಲಿ ಇರಬಾರದಲ್ಲವೇ? ಈ ಥರದ ಸ್ಥಾನಮಾನಕ್ಕೆ ಪರಿಷತ್ ಅಧ್ಯಕ್ಷರು ಹಲ್ಲುಗಿಂಜಿ ನಿಂತರ ಸಂಸ್ಥೆಯ ಸ್ವಾಯತ್ತತೆ ಎಲ್ಲಿ ಉಳಿಯುತ್ತದೆ. ಕಸಾಪ ಅಧ್ಯಕ್ಷರಾದವರು ಹಿಂದೆಯೆಲ್ಲ ಸರ್ಕಾರ ತಪ್ಪು ಮಾಡಿದಾಗಲೂ ಯಾವುದೇ ಮುಲಾಜಿಲ್ಲದೆ ಮಾತನಾಡುತ್ತಿದ್ದರು. ಸ್ವಭಾವತಃ ಹೋರಾಟಗಾರರೇ ಆಗಿದ್ದ ಪ್ರೊ ಚಂದ್ರಶೇಖರ ಪಾಟೀಲರು ಅಂದಿನ ಸರ್ಕಾರಕ್ಕೆ ಸವಾಲೊಡ್ಡಿಯೇ ಸಮ್ಮೇಳನ ನಡೆಸಿದ್ದರು. ಅಂದಿನ ಮುಖ್ಯಮಂತ್ರಿ ಸಮ್ಮೇಳನಕ್ಕೇ ಬರುವುದಿಲ್ಲ ಎಂದು ಬೆದರಿಸಿದರೂ ಚಂಪಾ ಅವರು ಅಂಜಿರಲಿಲ್ಲ. ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಅವರು ತಾವು ಹೇಳಬೇಕಾಗಿದ್ದನ್ನು ಹೇಳುವ ಎದೆಗಾರಿಕೆ ಪ್ರದರ್ಶಿಸಿದ್ದರು. ಯಾರ ಮುಲಾಜಿಗೂ ಬೀಳದೇ ಇದ್ದರಷ್ಟೆ ಇಂಥ ನಿಷ್ಠುರತೆ ಸಾಧ್ಯವಾಗುತ್ತದೆ. ಚಂಪಾ ಅಧ್ಯಕ್ಷತೆಯ ಅವಧಿಯಲ್ಲಿ ಸರ್ಕಾರದ ತೀರ್ಮಾನಗಳು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದ್ದಾಗ ಬೀದಿಗಿಳಿದು ಹೋರಾಡಲೂ ಅವರು ಹಿಂದೆಮುಂದೆ ನೋಡಲಿಲ್ಲ. ಆದರೆ ಈಗ ಆಗುತ್ತಿರುವುದೇನು? ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಈಗ ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ. ಸ್ಪರ್ಧೆ ಮಾಡಿದವರು ಕೋಟಿಗಳ ಲೆಕ್ಕದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಇಷ್ಟೆಲ್ಲ ಹಣ ಖರ್ಚು ಮಾಡಲು ಸಾಧ್ಯವಿಲ್ಲದ ಸಾಹಿತಿಗಳು ಹಿಂದೆ ಸರಿಯುತ್ತಿದ್ದರೆ ಸಾಹಿತ್ಯ ಪರಿಚಾರಕರ ಹೆಸರಿನ ರಾಜಕಾರಣಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಗೆಲುವಿಗಾಗಿ ರಾಜಕೀಯ ಪಕ್ಷಗಳ ಮುಂದೆ, ಆ ಪಕ್ಷಗಳ ಮಾತೃ ಸಂಘಟನೆಗಳ ಮುಂದೆ ಈ ಸ್ಪರ್ಧಿಗಳು ಕೈ ಒಡ್ಡಿ ನಿಲ್ಲುತ್ತಿದ್ದಾರೆ. ಹೀಗಿರುವಾಗ ಇಂಥವರು ಅಧ್ಯಕ್ಷರಾದರೆ ಕನ್ನಡ ಸಾಹಿತ್ಯ ಪರಿಷತ್ ನ ಘನತೆ ಉಳಿಯುತ್ತದೆಯೇ? ಕಸಾಪ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲು, ಅಧಿಕಾರದ ಅವಧಿ ವಿಸ್ತರಿಸಿಕೊಳ್ಳಲು ಮೇಲಿಂದ ಮೇಲೆ ಬೈಲಾ ತಿದ್ದುಪಡಿ ಮಾಡುವುದು ಯಾವ ಸಂದೇಶ ನೀಡುತ್ತದೆ? ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ. ಅದರ ಜೊತೆಗೆ ಪರಿಷತ್ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತೂ ಚರ್ಚೆಯಾಗಲಿ. ಸಾಹಿತ್ಯ ಪರಿಷತ್ ಎಂಬುದು ಸಾಹಿತಿಗಳ ಸಂಘಟನೆಯಾಗಿ ಉಳಿಯಬೇಕೆ ಹೊರತು ಅಲ್ಲಿ ಪುಡಾರಿಗಳ ಮೇಲಾಟ ನಡೆಯಬಾರದು. ಅದರ ಬಗ್ಗೆ ಗಂಭೀರ ಚರ್ಚೆ ನಡೆಯಲಿ ಎಂಬುದು ನನ್ನ ಕಾಳಜಿಯಾಗಿದೆ.
6
33
184
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ನಾಡಿನ ಹಿರಿಯ ಚೇತನ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಗಲಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ, ಐಟಿ ರಾಜಧಾನಿ ಇತ್ಯಾದಿ ಹೆಸರುಗಳು ಬರಲು ಮುಖ್ಯ ಕಾರಣ ಎಸ್.ಎಂ.ಕೃಷ್ಣ ಅವರು. ಅವರು ತಮ್ಮ ದೂರದೃಷ್ಟಿತ್ವ, ಅಭಿವೃದ್ಧಿಪರ ಚಿಂತನೆಯಿಂದ ಬೆಂಗಳೂರಿನ ಚಿತ್ರವನ್ನೇ ಬದಲಾಯಿಸಿದರು‌. ಸಜ್ಜನರು, ಸಹೃದಯಿಯೂ ಆಗಿದ್ದ ಎಸ್.ಎಂ. ಕೃಷ್ಣ ಅಜಾತಶತ್ರುವೆಂದು ಕರೆಯಿಸಿಕೊಂಡಿದ್ದರು. ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ತಮಗೆ ಒದಗಿಬಂದ ಎಲ್ಲ ಬಗೆಯ ಅಧಿಕಾರವನ್ನೂ ಜನರ ಒಳಿತಿಗೆ ಬಳಸಿಕೊಂಡರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅತ್ಯಂತ ಕಠಿಣ ಸಮಸ್ಯೆಗಳು ತಲೆದೋರಿದ್ದವು. ವರನಟ ಡಾ.ರಾಜಕುಮಾರ್ ಅಪಹರಣ, ಕಾವೇರಿ ವಿವಾದ.. ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನು ಅವರು ನಿಭಾಯಿಸಬೇಕಾಯಿತು. ಇಷ್ಟೆಲ್ಲದರ ನಡುವೆಯೂ ಅವರು ಆರ್ಥಿಕ ಕ್ಷೇತ್ರದಲ್ಲಿ ಕರ್ನಾಟಕವನ್ನು ಇಡೀ ದೇಶದಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದರು. ಇದು ಅವರ ಆಳವಾದ ರಾಜಕೀಯ ಪ್ರಜ್ಞೆ, ಅಧ್ಯಯನಶೀಲತೆ, ಕ್ರಿಯಾಶೀಲತೆ, ಅಪಾರವಾದ ಜ್ಞಾನವನ್ನು ತೋರಿಸುತ್ತದೆ. ಹಲವು ಬಾರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದಾಗ ನಾನು‌ ಗಮನಿಸಿದ್ದು ಅವರ ಸೂಕ್ಷ್ಮಗ್ರಾಹಿ ಗುಣ, ಸಂದರ್ಭವನ್ನು ಅರಿತು ನಿರ್ಧಾರ ತೆಗೆದುಕೊಳ್ಳುವ ಅವರ ರಾಜಕೀಯ ಚತುರತೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಳವಳಿ ಏರುಗತಿಯನ್ನು ಪಡೆದುಕೊಂಡಿತ್ತು. ಹೀಗಾಗಿ ನಾವು ಹಲವು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು. ಒಮ್ಮೆ ಬಳ್ಳಾರಿ ಜೈಲುವಾಸವನ್ನೂ ಅನುಭವಿಸಿದೆವು. ಎಲ್ಲ ಜೈಲು ನೋಡಿದ್ವಿ, ಅಂಡಮಾನ್ ಜೈಲೊಂದನ್ನು ನೋಡುವ ಆಸೆ, ಅಲ್ಲಿಗೂ ಕಳಿಸಿಬಿಡಿ ಎಂದು ಎಸ್.ಎಂ.ಕೃಷ್ಣ ಅವರಿಗೆ ಒಮ್ಮೆ ತಮಾಶೆಯಾಗಿ ಹೇಳಿದ್ದೆ. ಆದರೆ ಅವರು ಆಡಳಿತಾತ್ಮಕವಾಗಿ ಏನೇ ತೀರ್ಮಾನ ತೆಗೆದುಕೊಂಡರೂ ಅದರಲ್ಲಿ ವೈಯಕ್ತಿಕ ಹಗೆ, ಸೇಡು ಇತ್ಯಾದಿಯನ್ನು ಎಂದಿಗೂ ಮಿಶ್ರಣ ಮಾಡುತ್ತಿರಲಿಲ್ಲ‌. ಹೀಗಾಗಿ ಅವರ ಮೇಲಿನ ಅಭಿಮಾನಕ್ಕೆ ಎಂದೂ ಧಕ್ಕೆಯಾಗಿರಲಿಲ್ಲ. ಇವತ್ತಿನ ದ್ವೇಷ, ಸೇಡಿನ ರಾಜಕಾರಣಕ್ಕೆ ವ್ಯತಿರಿಕ್ತವಾಗಿ ಸ್ನೇಹ, ಪ್ರೀತಿಯ ರಾಜಕಾರಣವನ್ನು ನಡೆಸಿದವರು ಎಸ್.ಎಂ.ಕೃಷ್ಣ ಅವರು. ಈ ಗುಣಗಳಿಗಾಗಿಯೇ ಅವರು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ. ಎಸ್.ಎಂ. ಕೃಷ್ಣ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದೊರೆಯಲಿ. ಹೋಗಿ ಬನ್ನಿ ಸರ್, ನಿಮ್ಮ ಕೊಡುಗೆಯನ್ನು ಕರ್ನಾಟಕ ಎಂದಿಗೂ ಮರೆಯದು. ಭಾವಪೂರ್ಣ ಶ್ರದ್ಧಾಂಜಲಿಗಳು.
Tweet media one
3
15
225
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಕನ್ನಡಿಗರ ಪ್ರೀತಿ, ಅಭಿಮಾನಗಳಿಂದ ಆರ್ ಸಿಬಿ ಬೆಳೆದಿದೆ. ಆದರೆ ಈ ವಿಶ್ವಾಸಘಾತಕತನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ತಪ್ಪುಗಳನ್ನು ಈ ಕೂಡಲೇ ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ ಎಂದು ಎಚ್ಚರಿಸುತ್ತಿದ್ದೇನೆ. (8/8)
62
141
848
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
25 ಆಟಗಾರರ ಪೈಕಿ 22 ಆಟಗಾರರನ್ನು ಖರೀದಿ ಮಾಡಲಾಗಿದೆ. ಬಾಕಿ ಉಳಿದಿರುವ ಇನ್ನು ಮೂರು ಸ್ಥಾನಗಳಿಗಾದರೂ ಕನ್ನಡಿಗ ಆಟಗಾರರನ್ನೇ ಖರೀದಿಸಬೇಕು. ಸಾಮಾಜಿಕ ಜಾಲತಾಣಗಳಿಂದ ಈ ಕೂಡಲೇ ಹಿಂದಿ ಪುಟಗಳನ್ನು ಅಳಿಸಿಹಾಕಬೇಕು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ. (7/8)
76
102
637
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಕರ್ನಾಟಕ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್ ಸಿಬಿ ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬಂದಿದೆ. ಈ ಬಾರಿಯೂ ಅದೇ ಆಗಿದೆ. ದೇವದತ್ತ ಪಡಿಕ್ಕಲ್, ಮನೋಜ್ ಬಾಂಡಗೆ ಹೊರತುಪಡಿಸಿ ಯಾವ ಕನ್ನಡಿಗರನ್ನೂ ಖರೀದಿಸುವ ಮನಸು ಮಾಡಲಿಲ್ಲ. (6/8)
20
58
368
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಐದಾರು ಕನ್ನಡಿಗರನ್ನು ಖರೀದಿಸುವ ನಿರೀಕ್ಷೆ ಅಭಿಮಾನಿಗಳಿಗಿತ್ತು. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಖರೀದಿಸಿ ನಾಯಕನನ್ನಾಗಿಸುವ ಅವಕಾಶವೂ ಆರ್ ಸಿಬಿಗೆ ಇತ್ತು. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಅವಕಾಶಗಳನ್ನು ಕೈಚೆಲ್ಲಲಾಯಿತು. (5/8)
9
53
259
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಆರ್ ಸಿಬಿ ಫ್ರಾಂಚೈಸಿ ನಡೆಸುತ್ತಿರುವವರಿಗೆ ಹಿಂದಿಯೇ ಅತಿಪ್ರಿಯವಾಗಿದ್ದರೆ ಹಿಂದಿ ರಾಜ್ಯಗಳಿಗೆ ವಲಸೆ ಹೋಗಲಿ, ಬೆಂಗಳೂರು ಎಂಬ ಹೆಸರನ್ನು ಕೈಬಿಡಲಿ. ಕನ್ನಡಿಗರ ಆದರ, ಆತಿಥ್ಯ, ಅಭಿಮಾನವನ್ನು ಗಳಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುವ ಕೆಲಸವನ್ನೇಕೆ ಮಾಡುತ್ತಿದ್ದಾರೆ? (4/8)
13
58
252
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಆರ್ ಸಿಬಿ ಹಿಂದಿಯಲ್ಲಿ ಪುಟವನ್ನು ತೆರೆಯುವ ಮೂಲಕ ಕನ್ನಡಿಗರನ್ನು ಅಪಮಾನಿಸುತ್ತಿದೆ. ತಂಡದಲ್ಲಿ ಇತರ ರಾಜ್ಯಗಳ ಆಟಗಾರರಿದ್ದಾರೆ ಎಂಬ ಕಾರಣಕ್ಕೆ, ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಪುಟ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಪುಟ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ತೆರೆದರು? (3/8)
Tweet media one
10
64
239
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ಆರ್ ಸಿಬಿಯನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆರ್ ಸಿಬಿಗೆ ಇರುವಷ್ಟು ಅಭಿಮಾನಿಗಳು ಇನ್ಯಾವ ತಂಡಕ್ಕೂ ಇಲ್ಲ‌. ಹೀಗಾಗಿಯೇ ಅದರ ಆದಾಯ ವರ್ಷವರ್ಷಕ್ಕೂ ಹೆಚ್ಚುತ್ತಲೇ ಇದ್ದು, ಒಮ್ಮೆಯೂ ಕಪ್ ಗೆಲ್ಲದಿದ್ದರೂ ಮೂರನೇ ಶ್ರೀಮಂತ ತಂಡವಾಗಿದೆ. ಇದಕ್ಕೆ ಕಾರಣ ಕನ್ನಡಿಗರು ಎಂಬುದನ್ನು ಅದು ಮರೆತಿದೆ. (2/8)
4
48
211
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 months
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ‌. (1/8)
Tweet media one
112
213
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 months
ನಾಡಿನ‌ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಈ ದೀಪಾವಳಿ ನಾಡಿನ ಎಲ್ಲರ ಮನೆ, ಮನಗಳಲ್ಲಿ ಹೊಸಬೆಳಕನ್ನು ತರಲಿ. ಅಜ್ಞಾನದ ಅಂಧಕಾರ ತೊಲಗಲಿ. ಎಲ್ಲರ ಬಾಳು ಬಂಗಾರವಾಗಲಿ.
Tweet media one
8
16
216
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 months
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಶುಭಾಶಯಗಳು. ವಿಜಯ ದಶಮಿ ಎಲ್ಲರ ಬಾಳಲ್ಲಿ ಗೆಲುವನ್ನೇ ತರಲಿ.
Tweet media one
4
11
120